ನೀ ನೆಡೆದು ಬಂದೆ ಇಬ್ಬನಿಗಳೆಲ್ಲ ನಕ್ಕವು ನೀನಿರುವುದೇ ಹಾಗೆ
ಸವಿ ಮುತ್ತ ನೀಡಿದೆ ಚಿಕ್ಕೆಗಳೆಲ್ಲ ನಕ್ಕವು ನೀನಿರುವುದೇ ಹಾಗೆ
ಮುಂಜಾವಿನ ಹೊಂಗಿರಣದಿ ತೊಯ್ದು ಗಿಡಗಂಟೆ ಬಳ್ಳಿಗಳೆಲ್ಲ
ಚಿಗುರು ಬೆರಳಿಂದ ಸವರಿದೆ ಮೊಗ್ಗೆಲ್ಲ ಅರಳಿದವು ನೀನಿರುವುದೇ ಹಾಗೆ
ಸುಳಿವ್ ತಂಗಾಳಿಯಲ್ಲಿ ನೀರವ ಮೌನದಲ್ಲಿ ಪಿಸುಮಾತಿನ ಹೊನಲ
ಹರಿಸಿದೆ ಕೋಗಿಲೆಗಳೆಲ್ಲ ಕೂಜನವ ಮರೆತವು ನೀನಿರುವುದೇ ಹಾಗೆ
ಕುಡಿನೋಟ, ಹುಸಿನಗೆ, ಕಿರುಗೆಜ್ಜೆಯ ನಾದವ ಹೊಮ್ಮಿಸಿ, ಚಿಮ್ಮುತ, ಬಳುಕುತ
ಹಸಿರಲ್ಲೆಲ್ಲ ಸುಳಿದೆ ಚಿಟ್ಟೆಗಳೆಲ್ಲ ಬೆರಗಾದವು ನೀನಿರುವುದೇ ಹಾಗೆ
ಸುಳಿಸುಳಿಯಾಗಿ ಹೆರಳ ಕೆದರಿ ಕೊರಳ ಕೊಂಕಿಸಿ ಓರೆನೋಟವ ಬೀರಿ
ಮುನಿಸು ತೋರಿದೆ ನವಿಲುಗಳೆಲ್ಲ ಹೆಜ್ಜೆ ಮರೆತವು ನೀನಿರುವುದೇ ಹಾಗೆ
ಸಿದ್ಡರಾಮ ಹಿರೇಮಠ,ಕೂಡ್ಲಿಗಿ
4 ಕಾಮೆಂಟ್‌ಗಳು:
ಚನ್ನಾಗಿದೆ. ವಿಷಯ ಹಿತವಾಗಿದೆ. ಮರೆತು ಹೋದ ರೂಪಗಳಿಗೆ ಜೀವ ತಂದಿದ್ದೀರಿ. ಲಯ ಇನ್ನಷ್ಟು ಬೇಕಿತ್ತೇನೋ. ಗಜಲ್ ಕೇವಲ ಒಂದು ಕವನವಷ್ಟೇ ಅಲ್ಲವಲ್ಲ. ಭಾವ ಸುಲಲಿತವಾಗಲಿ.
ಧನ್ಯವಾದಗಳು ನವೀನ್, ಮತ್ತಷ್ಟು ಪ್ರಯತ್ನಿಸುವೆ. -ಸಿದ್ಧರಾಮ ಹಿರೇಮಠ. ಕೂಡ್ಲಿಗಿ
gazalna navirutana endigu haage nammali uliyuvanttaddu.....danyavaadagalu nimage
dear siddarama hiremath, 'neeniruvude haage...' ninna ghazal kooda. -Kaligananath gudadur
ಕಾಮೆಂಟ್ ಪೋಸ್ಟ್ ಮಾಡಿ