ಶುಕ್ರವಾರ, ಜನವರಿ 9, 2009


(ಮೈಸೂರಿನ ಗೆಳೆಯ ಎಚ್.ಎನ್.ಈಶಕುಮಾರ್ ತಮ್ಮ ಪುಟ್ಟ ಕವನದಿಂದ ಬ್ಲಾಗಿನ ಎಲ್ಲಾ ಗೆಳೆಯರಿಗೆ ಹೊಸ ವರ್ಷದ ಮತ್ತು ಸಂಕ್ರಾಂತಿಯ ಶುಭಾಶಯಗಳನ್ನು ತಿಳಿಸಿದ್ದಾರೆ)

ಹಳೆ ಬೇರಿನ ಸತ್ವವಹುದಲ್ಲವೇ
ಹೊಸ ಚಿಗುರಿನ ನವನೀತ ಚಿಗುರುತನ
ನಳನಳಿಸುವ ಹಸಿರ ಸಿಂಚನದ
ಒಡಲಲಿಲ್ಲವೇ ಭೂತಾಯಿಯ ಗುಣ
ಹಳೆಯ ಅನುಭವದ ನೆನಪ
ಸೊಗಡಿನ ಆಹ್ಲಾದದ ಪಸರಲ್ಲವೇ
ಹೊಸತರ ಅನ್ವೇಷಣೆ
ಹಳತು ಹೊಸತುಗಳೆರಡರ
ಸಮ್ಮಿಲ್ಲನವೇ ನವೋಲ್ಲಾಸದ ಸೊಬಗು...
ಹೊಸ ವರುಷದ ಹೊಸ ಹುಡುಕಾಟಕೆ
ನೂರು ರಹದಾರಿಗಳಿರಲಿ...
ಮನಕೆ ಚೈತನ್ಯವಿರಲಿ
ಸದಾಕಾಲ

1 ಕಾಮೆಂಟ್‌:

ಅನಾಮಧೇಯ ಹೇಳಿದರು...

ಈಶಕುಮಾರ್ ಅವರು ಸಾಕಷ್ಟು ಕವನಗಳನ್ನು ಬರೆಯುತ್ತಾರೆ. ಅವನ್ನು ಈ-ಮೆಯಿಲ್‍ ಮೂಲಕವನ್ನು ಕಳಿಸುತ್ತಿರುತ್ತಾರೆ. ಅವರದೊಂದು ಹೊಸ ದನಿ. ಅವರು ನಾವು ನಮ್ಮಲ್ಲಿ ಬ್ಲಾಗಿಗೆ ಬರೆಯತೊಡಗಿದ್ದು ನನಗೆ ಖುಷಿ ಕೊಟ್ಟಿದೆ.
ಈಶ್,
ಬರೆಯುತ್ತಿರಿ. ಪ್ರತಿ ಹೊಸದಿನ ಹೊಸತನವ ತರಲಿ. ಹಳೆಯ ನೆನಪುಗಳು ಹೊಸ ಪಾಠಗಳನ್ನು ಕಲಿಸುತ್ತಿರುತ್ತದೆ... ನಿಮ್ಮ ಮುಂಚಿನ ಕವನಗಳನ್ನು ಬ್ಲ್ಲಾಗ್‍ಗೆ ಹಾಕಿ. ಅವು ನಿಜಕ್ಕೂ ಗಂಭೀರವಾಗಿವೆ.ಯೋಚನೆಯ ಹುಟ್ಟುಹಾಕುತ್ತವೆ.